ಯೋಗರಾಜ್ ಭಟ್ (ಜನನ ೮ ಅಕ್ಟೋಬರ್ ೧೯೭೨) ಒಬ್ಬ ಭಾರತೀಯ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಹಾಗೂ ಗೀತರಚನೆಕಾರ. ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ೨೦೦೬ ರ ಮುಂಗಾರು ಮಳೆ ಚಿತ್ರದ ಬಿಡುಗಡೆಯಿಂದಾಗಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಈ ಚಿತ್ರವು ಬಿಡುಗಡೆಯಾದ ಸಮಯದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಸಂಗ್ರಹವನ್ನು ದಾಖಲಿಸಿತು ಮತ್ತು ಮಲ್ಟಿಪ್ಲೆಕ್ಸ್‌ನಲ್ಲಿ ಅತಿ ಹೆಚ್ಚು ಕಾಲ ಮುಂದುವರಿದ ಚಿತ್ರವಾಗಿದೆ. == ಆರಂಭಿಕ ಜೀವನ == ಯೋಗರಾಜ್ ಭಟ್‌ರವರು ಕರ್ನಾಟಕದ ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಜನಿಸಿದರು ಹಾಗೂ ಹಾವೇರಿಯ ತಿಳವಳ್ಳಿಯಲ್ಲಿ ಬೆಳೆದರು. ರಾಮಚಂದ್ರ ಭಟ್ ಮತ್ತು ಜಯಲಕ್ಷ್ಮಿ ಭಟ್ ದಂಪತಿಯ ಏಳು ಮಕ್ಕಳಲ್ಲಿ ಇವರು ಕಿರಿಯ ಮಗನಾಗಿದ್ದಾರೆ. ಇವರು ದೋಣಿ ಅಪಘಾತದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. == ವೃತ್ತಿಜೀವನ == === ನಿರ್ದೇಶಕ === ಇವರ ಮುಂಗಾರು ಮಳೆ ಚಿತ್ರವು ಅಂದಾಜು ೫೦-೭೫ ಕೋಟಿಗಳನ್ನು ಸಂಗ್ರಹಿಸಿತು. ಇದು ಅವರ ಮೂರನೇ ಚಿತ್ರವಾಗಿದ್ದು, ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಈ ಚಿತ್ರವು ಸುಮಾರು ೪೬೪ ದಿನಗಳ ಕಾಲ ಮುಂದುವರಿಯಿತು ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಇಡೀ ವರ್ಷ ನಿರಂತರವಾಗಿ ಮುಂದುವರಿದು ಯಾವುದೇ ಭಾಷೆಯ ಮೊದಲ ಚಿತ್ರವಾಗಿ, ಅತಿದೊಡ್ಡ ಹಿಂದಿ ಚಲನಚಿತ್ರೋದ್ಯಮದ ದಾಖಲೆಗಳನ್ನು ಮುರಿಯಿತು. ಇದು ಸ್ವಾಭಾವಿಕವಾಗಿ ಅವರಿಗೆ ಒಂಬತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳು (ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ) ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು (ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಸಾಹಿತ್ಯ ಮತ್ತು ಅತ್ಯುತ್ತಮ ಛಾಯಾಗ್ರಹಣ) ಸೇರಿದಂತೆ ಅನೇಕ ಬಹುಮಾನಗಳು, ಪ್ರಶಸ್ತಿಗಳು ಮತ್ತು ಮೆಚ್ಚುಗೆಗಳನ್ನು ತಂದಿತು. ಈ ಚಿತ್ರವನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಮತ್ತು ಬಂಗಾಳಿ ಭಾಷೆಗಳಲ್ಲಿ ಬಳಕೆ ಮಾಡಲಾಗಿದೆ. ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಹಕ್ಕುಗಳನ್ನು ಶ್ರೀ ಬೋನಿ ಕಪೂರ್ ಖರೀದಿಸಿದ್ದಾರೆ. ಅವರು ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ವಾಸ್ತು ಪ್ರಕಾರ, ದನ ಕಾಯೋನು, ಮುಗುಳು ನಗೆ ಮತ್ತು ಇತರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ === ಗೀತರಚನೆಕಾರ === ಮುಂಗಾರು ಮಳೆ, ಗಾಳಿಪಟ, ಜಂಗ್ಲೀ, ಜಾಕಿ, ಮನಸಾರೆ, ಪಂಚರಂಗಿ, ಪರಮಾತ್ಮ, ವಿಕ್ಟರಿ, ಹುಡುಗರು, ಡ್ರಾಮಾ, ಕಡ್ಡಿಪುಡಿ, ಬಚ್ಚನ್, ಅಧ್ಯಕ್ಷ, ಗಜಕೇಸರಿ, ರಾಜಾಹುಲಿ ಮುಂತಾದ ಕನ್ನಡ ಸಿನಿಮಾಗಳಿಗೆ ಯೋಗರಾಜ್ ಭಟ್‌ರವರು ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ. ಡ್ರಾಮಾ ಚಿತ್ರದ ಬೊಂಬೆ ಆಡ್ಸೋನು ಹಾಡಿಗಾಗಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. == ಚಲನಚಿತ್ರಗಳ ಪಟ್ಟಿ == === ನಟನೆ === == ಪ್ರಶಸ್ತಿಗಳು == ೨೦೧೩ - ತಮ್ಮ ಸ್ವಂತ ನಿರ್ದೇಶನದ ಚಿತ್ರ "ಡ್ರಾಮಾ (೨೦೧೨ ಚಲನಚಿತ್ರ)" ದ "ಬೊಂಬೆ ಅಡ್ಸೋನು" ಹಾಡಿಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಗೆದ್ದರು.. ೨೦೧೩ - ಬೊಂಬೆ ಅಡ್ಸೋನು ಹಾಡಿಗಾಗಿ "ಅತ್ಯುತ್ತಮ ಗೀತರಚನೆಕಾರ" ವಿಭಾಗದಲ್ಲಿ ಬೆಂಗಳೂರು ಟೈಮ್ಸ್ ಫಿಲ್ಮ್ ಪ್ರಶಸ್ತಿಯನ್ನು ಗೆದ್ದುಕೊಂಡರು. == ಉಲ್ಲೇಖಗಳು ==